ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸ್ವಯಂ ತನಗೂ ಇತರರಿಗೂ ಉಂಟಾಗುವ ತೊಂದರೆಗಳ ಎಲ್ಲಾ ವಿಧಗಳನ್ನೂ, ರೂಪಗಳನ್ನೂ ತಡೆಗಟ್ಟುವುದು ಕಡ್ಡಾಯವಾಗಿದೆ ಮತ್ತು ಯಾವುದೇ ವ್ಯಕ್ತಿಯೂ ತನಗಾಗಲಿ ಅಥವಾ ಇತರರಿಗಾಗಲಿ ತೊಂದರೆ ಕೊಡುವುದು ಧರ್ಮಸಮ್ಮತವಲ್ಲ. ಅದೇ ರೀತಿ, ಯಾರಾದರೂ ತೊಂದರೆ ಕೊಟ್ಟರೆ ಅದಕ್ಕೆ ಪ್ರತಿಯಾಗಿ ಅವನಿಗೆ ತೊಂದರೆ ಕೊಡುವುದು ಧರ್ಮಸಮ್ಮತವಲ್ಲ. ಏಕೆಂದರೆ, ತೊಂದರೆಯನ್ನು ತೊಂದರೆಯಿಂದ ನಿವಾರಿಸಲಾಗುವುದಿಲ್ಲ. ಆದರೆ ಹದ್ದು ಮೀರದ ರೀತಿಯಲ್ಲಿರುವ ಪ್ರತೀಕಾರ ಶಿಕ್ಷೆಗಳು ಇದಕ್ಕೆ ಹೊರತಾಗಿವೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ತೊಂದರೆ ಕೊಡುವವನಿಗೆ ತೊಂದರೆ ಉಂಟಾಗುತ್ತದೆ ಮತ್ತು ಜನರಿಗೆ ಕಷ್ಟ ಕೊಡುವವನು ಕಷ್ಟವನ್ನು ಅನುಭವಿಸುತ್ತಾನೆ ಎಂದು ಎಚ್ಚರಿಕೆ ನೀಡುತ್ತಾರೆ.